ಬ್ಯಾಕರವಳ್ಳಿ ಕ್ಷೇತ್ರದಲ್ಲಿ ಹೊಸ ರಾಜಕೀಯ ಸಂಚಲನಕ್ಕೆ ಮುನ್ನುಡಿ : ಜನಪರ ಹೋರಾಟಗಳ ಯುವ ಮುಖ ಮಂಜುದೇವ್ ಹುಲ್ಲಹಳ್ಳಿ ಚುನಾವಣಾ ಕಣಕ್ಕೆ

ಸಕಲೇಶಪುರ: ಮಲೆನಾಡಿನ ಜನರ ಸಂಕಷ್ಟಗಳಿಗೆ ಧ್ವನಿಯಾಗಿ, ಕಷ್ಟದ ಸಮಯದಲ್ಲಿ ಜನರ ನೆರವಿಗೆ ಧಾವಿಸುತ್ತಿರುವ ಯುವ ನಾಯಕ ಮಂಜುದೇವ್ ಹುಲ್ಲಹಳ್ಳಿ ಅವರು ಬ್ಯಾಕರವಳ್ಳಿ ತಾಲ್ಲೂಕು ಪಂಚಾಯಿತಿ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಆಸಕ್ತಿ ವ್ಯಕ್ತಪಡಿಸಿದ್ದಾರೆ. ಇವರ ಮುಂದಿನ ರಾಜಕೀಯ ಹೆಜ್ಜೆ ಇದೀಗ ಸ್ಥಳೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಮಲೆನಾಡು ರಕ್ಷಣಾ ಸೇನೆಯ ಸಕಲೇಶಪುರ ತಾಲ್ಲೂಕು ಅಧ್ಯಕ್ಷರಾಗಿರುವ ಮಂಜುದೇವ್, ಕಾಡಾನೆ–ಮಾನವ ಸಂಘರ್ಷದ ಸಂದರ್ಭದಲ್ಲಿ ರೈತರ ಪರವಾಗಿ ಧ್ವನಿ ಎತ್ತುತ್ತಾ, ಮಲೆನಾಡಿನ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿದ್ದಾರೆ.
ಸಕಲೇಶಪುರದಲ್ಲಿ ಗುಡ್ಡ ಕುಸಿತದಂತಹ ತುರ್ತು ಸಂದರ್ಭಗಳಲ್ಲಿ ಗ್ರಾಮೀಣ ಜನರಿಗೆ ನೆರವಾಗಲು ಉಚಿತ ಆಂಬುಲೆನ್ಸ್ ಸೇವೆ ಒದಗಿಸುವ ಮೂಲಕವೂ ಗಮನ ಸೆಳೆದಿದ್ದಾರೆ. ಹಳ್ಳಿಗಳ ಜನರಿಗೆ ಸಂಕಷ್ಟ ಎದುರಾದಾಗ ತಕ್ಷಣ ಸ್ಪಂದಿಸುವ ಅವರ ಸೇವಾ ಮನೋಭಾವ ಸ್ಥಳೀಯವಾಗಿ ಗುರುತಿಸಿಕೊಂಡಿದೆ.
ಇದೀಗ ಜನಪರ ಹೋರಾಟದ ಹಾದಿಯಿಂದ ಸ್ಥಳೀಯ ರಾಜಕೀಯದತ್ತ ಹೆಜ್ಜೆ ಇಡಲು ಮುಂದಾಗಿರುವ ಅವರು, ಕ್ಷೇತ್ರದ ಅಭಿವೃದ್ಧಿ, ರೈತರ ಹಿತಾಸಕ್ತಿ ಹಾಗೂ ಗ್ರಾಮೀಣ ಜನರ ಮೂಲಭೂತ ಸಮಸ್ಯೆಗಳಿಗೆ ಆದ್ಯತೆ ನೀಡುವ ಆಶಯ ಹೊಂದಿದ್ದಾರೆ.
ಜನರ ಕಷ್ಟಕ್ಕೆ ಸ್ಪಂದಿಸುವ ಹೋರಾಟಗಾರನಿಗೆ ಜನಪ್ರತಿನಿಧಿಯಾಗುವ ಅವಕಾಶ ಸಿಗುತ್ತದೆಯೇ? ಬ್ಯಾಕರವಳ್ಳಿ ಕ್ಷೇತ್ರದಲ್ಲಿ ಯುವ ನಾಯಕತ್ವಕ್ಕೆ ಮನ್ನಣೆ ದೊರೆಯುತ್ತದೆಯೇ? ಎಂಬ ಕುತೂಹಲ ಇದೀಗ ಮೂಡಿದೆ.